Questions? 08379-262349

Webful Education


ಮುನ್ನುಡಿ (ಪ್ರಾಂಶುಪಾಲರ ಸಂದೇಶ)


"ನಾಳೆಯ ಅತ್ತ್ಯುತ್ತಮ ಪೂರ್ವಸಿದ್ದತೆಗೆ ತಯಾರಿ, ಇಂದಿನ ಕೆಲಸವನ್ನು ಮೊದಲು ಅತ್ತ್ಯುತ್ತಮವಾಗಿ ಪೂರ್ಣಗೊಳಿಸುವದು"

ನಮ್ಮ ಸಂಸ್ಥೆಯು 2007-08 ನೇ ಸಾಲಿನಲ್ಲಿ ಗ್ರಾಮೀಣ ಭಾಗದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣವನ್ನು ಶ್ರೇಷ್ಟತೆಯೊಂದಿಗೆ ಒದಗಿಸುವ ಕೇಂದ್ರವಾಗಿ ಹೊರಹೊಮ್ಮಿದೆ. ಈ ದೇಶದ ಉದ್ಯಮಗಳಿಗೆ ಮೂಲಭೂತ ಅವಶ್ಯವಾಗಿ ಬೇಕಾಗಿರುವ ತಾಂತ್ರಿಕ ಕೌಶಲ್ಯದಲ್ಲಿ ಪಳಗಿದ ಮತ್ತು ಪ್ರಾಯೋಗಿಕ ಹಾಗೂ ಸೈದ್ದಾಂತಿಕವಾಗಿ ಜ್ಞಾನಾರ್ಜನೆಯನ್ನು ಪಡೆದಿರುವ ಮಾನವ ಸಂಪನ್ಮೂಲವನ್ನು ಒದಗಿಸುವಲ್ಲಿ ನಮ್ಮ ಸಂಸ್ಥೆಯು ಪ್ರಾಮಾಣಿಕ ಪ್ರಯತ್ನದ ಕೊಡುಗೆಯನ್ನು ನೀಡುತ್ತಾ ಬರುತ್ತಿದೆ.

ನಮ್ಮ ಸಂಸ್ಥೆಯ ವಿಧ್ಯಾರ್ಥಿಗಳು ಶೈಕ್ಷಣಿಕ ವಲಯದಲ್ಲಿ ಪ್ರಗತಿ ಸಾಧಿಸುವುದರೊಂದಿಗೆ, ನಮ್ಮ ಕಾಲೇಜಿನ ರೆಡ್ ಕ್ರಾಸ್, ಎನ್. ಎಸ್. ಎಸ್, ವಿಧ್ಯಾರ್ಥಿ ಕ್ಷೇಮಾಭಿವೃದ್ಧಿ, ಕ್ರೀಡಾ ಘಟಕಗಳ ಮೂಲಕ ಸಾಂಸ್ಕೃತಿಕ, ಸಾಮಾಜಿಕ, ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮತ್ತು ತರಬೇತಿ ಹಾಗೂ ನೇಮಕಾತಿ ಘಟಕಗಳ ಮೂಲಕ ವಿವಿಧ ಕಂಪನಿಗಳಲ್ಲಿ ವೃತ್ತಿ ಸೇರ್ಪಡೆಯಾಗುವದರ ಜೊತೆಗೆ ಎಲ್ಲ ರಂಗಗಳಲ್ಲಿಯೂ ಯಶಸ್ಸನ್ನು ಸಾಧಿಸುತ್ತ ಬಂದಿದ್ದಾರೆ.

ನಮ್ಮ ಸಂಸ್ಥೆಯ ವೆಬ್ ಸೈಟ್ ವರದಿಯನ್ನು ನಮ್ಮ ಸಂಸ್ಥೆಯ ಉಪನ್ಯಾಸಕರಾದ ಶ್ರೀ ದೊಡ್ಡಮನಿ ಬಸವರಾಜ ಹಾಗೂ ಶ್ರೀ ಸಂತೋಷ ಕೂರದಗಿ (ಪ್ರಥಮ ದರ್ಜೆ ಸಹಾಯಕರು) ಸಿದ್ಧಪಡಿಸುವಲ್ಲಿ ಸಹಾಯಕರಾಗಿರುತ್ತಾರೆ. ನಮ್ಮ ಸಂಸ್ಥೆಯ ವಿವಿಧ ವಿಭಾಗಗಳ ವಿಭಾಗಾಧಿಕಾರಿಗಳು ಮತ್ತು ಉಪನ್ಯಾಸಕ ಸಿಬ್ಬಂದಿ ಹಾಗೂ ಕಚೇರಿ ಸಿಬ್ಬಂದಿಯವರು ತಮ್ಮ ವಿಭಾಗಗಳ ಚಟುವಟಿಕೆಗಳನ್ನು ಸಫಲವಾಗಿ ಪೂರೈಸುತ್ತಾ ಬರುತ್ತಿದ್ದಾರೆ.

ನಮ್ಮ ಸಂಸ್ಥೆಯ ಆಡಳಿತಾತ್ಮಕ ಮತ್ತು ಶೈಕ್ಷಣಿಕವಾಗಿ ಶ್ರೇಷ್ಟತೆಯನ್ನು ಸಾಧಿಸಲು ಪ್ರಯತ್ನಿಸುವ ಸಕಲ ಸಿಬ್ಬಂದಿ ಹಾಗೂ ವಿಧ್ಯಾರ್ಥಿಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು.

ಪ್ರಾಚಾರ್ಯರು: ಪರಮೇಶ್ವರ ರಾಠೋಡ